ತೊಕ್ಕೊಟ್ಟು ಶ್ರೀ ವಿಠೋಭ ರುಕ್ಮಾಯಿ ಮಂದಿರದಲ್ಲಿ ಚಿತ್ರಕಲಾ ತರಬೇತಿ ತರಗತಿ ಶುಭಾರಂಭ
ಭಾರತ ಸರ್ಕಾರದ MSME UDYAM ಅಡಿಯಲ್ಲಿ ನೋಂದಾಯಿತ ಶ್ರೀ ನಾರಾಯಣ ಗುರು ಸ್ಕೂಲ್ ಆಫ್ ಆರ್ಟ್ ವತಿಯಿಂದ ತೊಕ್ಕೊಟ್ಟು ಶ್ರೀ ವಿಠೋಭ ರುಕ್ಮಾಯಿ ಮಂದಿರದಲ್ಲಿ ಚಿತ್ರಕಲಾ ತರಬೇತಿ ತರಗತಿಗಳನ್ನು ಶುಭಾರಂಭ ಮಾಡಲಾಯಿತು.
ಕಾರ್ಯಕ್ರಮದ ಆರಂಭದಲ್ಲಿ ಮಂದಿರದ ಗೌರವಾಧ್ಯಕ್ಷರಾದ ಶ್ರೀ ಪದ್ಮನಾಭ ಕಾರ್ಪೆಂಟರ್ ಅವರ ಉಪಸ್ಥಿತಿಯಲ್ಲಿ ಶ್ರೀ ದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿ, ಬಳಿಕ ಚಿತ್ರಕಲಾ ತರಗತಿಗಳಿಗೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಜೊತೆ ಕಾರ್ಯದರ್ಶಿಗಳಾದ ಶ್ರೀ ಪ್ರದೀಪ್ ಗಟ್ಟಿ ಭಟ್ನಗರ, ಶ್ರೀ ಮನೋಜ್ ರೈ ಹಾಗೂ ಶ್ರೀ ನವೀನ್ ಶೆಟ್ಟಿಗಾರ್ ಉಪಸ್ಥಿತರಿದ್ದು, ತರಗತಿಗಳ ಯಶಸ್ವಿ ಆರಂಭಕ್ಕೆ ಸಹಕರಿಸಿದರು.
ಚಿತ್ರಕಲಾ ತರಗತಿಗಳನ್ನು ನಡೆಸಲು ಅವಕಾಶ ಕಲ್ಪಿಸಿದ ಮಂದಿರದ ಅಧ್ಯಕ್ಷರಾದ ಶ್ರೀ ಸಚ್ಚೀಂದ್ರ ಸಾಲ್ಯಾನ್, ಗೌರವಾಧ್ಯಕ್ಷರಾದ ಶ್ರೀ ದೇವದಾಸ್ ಕಾಯಂಗಳ, ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ನಾಗೇಶ್ ತೊಕ್ಕೊಟ್ಟು, ಉಪಾಧ್ಯಕ್ಷರಾದ ಶ್ರೀ ಟಿ.ಎನ್. ಗಟ್ಟಿ ತೊಕ್ಕೊಟ್ಟು, ಶ್ರೀಮತಿ ಜಯಂತಿ ಭಾಸ್ಕರ (ಕೃಷ್ಣನಗರ), ಕೋಶಾಧಿಕಾರಿಗಳಾದ ಶ್ರೀ ಮೋಹನ್ ಬಂಗೇರ (ಭಟ್ನಗರ), ಜೊತೆ ಕಾರ್ಯದರ್ಶಿಗಳಾದ ಶ್ರೀ ಸಂದೀಪ್ ಕಾಪಿಕಾಡು, ಸಂಘಟನಾ ಕಾರ್ಯದರ್ಶಿಗಳಾದ ಶ್ರೀ ಚೇತನ್ ಕುಮಾರ್ ಶೆಟ್ಟಿ (ತೊಕ್ಕೊಟ್ಟು), ಶ್ರೀಮತಿ ಸಂಧ್ಯಾ ನವೀನ್ (ಕೃಷ್ಣನಗರ), ಆರ್ಚಕರಾದ ಶ್ರೀ ಸುಕುಮಾರ್ ಸಾಲ್ಯಾನ್, ಡಾ. ಅರುಣ್ ಉಳ್ಳಾಲ್, ಶ್ರೀ ಸಂದೀಪ್ ಭಟ್ನಗರ, ಭಜನಾ ಸಂಚಾಲಕರಾದ ಶ್ರೀ ವಸಂತ ರಾವ್ (ಗೋರಿಗುಡ್ಡೆ), ಶ್ರೀ ರಾಮಚಂದ್ರ ಆಚಾರಿ, ಶ್ರೀ ನಾರಾಯಣ ಗಟ್ಟಿ, ಶ್ರೀ ಗಂಗಾಧರ ಶೆಟ್ಟಿ, ಶ್ರೀ ಗಂಗಯ್ಯ ಗಟ್ಟಿ ಹಾಗೂ ಮಂದಿರದ ಸರ್ವ ಸದಸ್ಯರಿಗೆ ಶ್ರೀ ನಾರಾಯಣ ಗುರು ಸ್ಕೂಲ್ ಆಫ್ ಆರ್ಟ್ ವತಿಯಿಂದ ಹೃತ್ಪೂರ್ವಕ ಕೃತಜ್ಞತೆಗಳು ಹಾಗೂ ಅನಂತ ಧನ್ಯವಾದಗಳನ್ನು ಸಲ್ಲಿಸಲಾಗುತ್ತದೆ.
🙏🙏🙏🤝🤝🤝🙏🙏🙏
– ಸುರೇಶ್ ಕೆ. ಪಾಂಡವರಕಲ್ಲು
ಸಂಸ್ಥಾಪಕರು / ನಿರ್ದೇಶಕರು / ಚಿತ್ರಕಲಾ ಶಿಕ್ಷಕರು
ಶ್ರೀ ನಾರಾಯಣ ಗುರು ಸ್ಕೂಲ್ ಆಫ್ ಆರ್ಟ್ ®
https://www.facebook.com/share/p/18oFUYADRC/